Tuesday, July 01, 2008

ಸರಿಯೇನೋ ಹರಿ

ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಈ ಪರಿ ತುಂಟತನ
ಸರಿಯೇನೋ ಹರಿ ಸರಿಯೇನೋ
ನೆರೆ ಮನೆಗಳಿಗೋಗಿ ಬೆಣ್ಣೆ ಕದಿವೆಯಂತೆ
ಹರೆಯದ ಬಾಲೆಯರ ಜಡೆ ಎಳೆಯುವೆಯಂತೆ
ದೂರುಗಳನೆಷ್ಟೆಂದು ನಾ ಕೇಳಿಕೊಳ್ಳಲಿ
ಊರವರ ಮಾತುಗಳ ಹ್ಯಾಗೆ ತಾನೆ ಸೈರಿಸಲಿ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಕೆರೆಯೊಳಗೋಗಿ ನೀನು ಬಾಲ ಹಿಡಿಯುವೆಯಂತೆ
ಹಾವ ಹೆಡೆಯ ಮೇಲೆ ಕುಣಿಕುಣಿಯುವೆಯಂತೆ
ಏನಾದರಾದರೆ ನಾನೇನು ಮಾಡಲಿ
ನಿನ್ನಪ್ಪ ಕೇಳಿದರೆ ನಾನೇನ ಹೇಳಲಿ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಚಿಕ್ಕ ಹುಡುಗನು ನೀನು ದೇವರಂತಿರಬೇಕು
ಸಿಕ್ಕಸಿಕ್ಕವರ ಜೊತೆ ಜಗಳ ಏತಕೆ ಬೇಕು
ಅಕ್ಕಪಕ್ಕದವರೆಲ್ಲ ಹೊಗಳುವಂತಿರಬೇಕು
ಚೊಕ್ಕ ಬಂಗಾರ ನೀನು ನನಗಿನ್ನೇನು ಬೇಕು
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ದಿನಾಂಕ::

1 comment:

Vish said...

thumba sariyagi kelidira hari ge sariyeno hari antha.... ista vayithu...