Friday, October 13, 2006

ಶಕ್ತಿ ಗೀತೆ(ಒಂದು ಕವನ)

ಬನ್ನಿರೀ ಮಹಿಳೆಯರೇ,ಬನ್ನಿರೀ ಮಹಿಳೆಯರೇ
ಆರಾಧಿಸಿ ಅಷ್ಟ ಶಕ್ತಿಯಾ
ಆವಾಹಿಸಿ ಇಷ್ಟ ಶಕ್ತಿಯಾ
ಹೊಡೆದೋಡಿಸೀ ದುಷ್ಟ ಶಕ್ತಿಯಾ
ಹೊಡೆದೋಡಿಸೀ ದುಷ್ಟ ಶಕ್ತಿಯಾ
ಸ್ತ್ರೀ ಶಕ್ತಿ ಆದಿ ಶಕ್ತಿ ಪರಾಶಕ್ತಿ ಪ್ರಳಯ ಶಕ್ತಿ
ಸರ್ವ ಶಕ್ತಿ ಮಾತಾ,

ಆರಾಧಿಸಿ ಅಷ್ಟ ಶಕ್ತಿಯಾ
ಹೊಡೆದೋಡಿಸೀ ದುಷ್ಟ ಶಕ್ತಿಯಾ
1)ಚಾಮುಂಡಿ ಚಂಡಿ ನೀನು,ಮಹಿಷಿ ನೀನು ಕಾಳಿ ನೀನು
ಅಷ್ಟ ಭುಜದ ದುರ್ಗಿ ನೀನು ನೆನಪಿಲ್ಲವೇ
ಅಬಲೆಯೆಂಬ ಶಂಕೆ ಯಾಕೆ
ಮಹಿಳೆಯೆಂಬ ಬಿಂಕ ಬೇಕೆ
ಅಂದ ಮೊಗದ ಚಂದ್ರಮುಖಿ
ಆಗು ಬಾ ಜ್ವಾಲಾ ಮುಖಿ
ಆರಾಧಿಸಿ ಅಷ್ಟ ಶಕ್ತಿಯಾ
ಹೊಡೆದೋಡಿಸೀ ದುಷ್ಟ ಶಕ್ತಿಯಾ
2)ಜೂಜು ಕುಡಿತ ಮೋಜು ಕುಣಿತ
ಪ್ರಾಣಿಬಲದ ಮೂಳೆ ಮುರಿತ ಸಾಕಲ್ಲವೇ
ಪುರುಷಕುಲದ ಅಟ್ಟಹಾಸ ರೋಸಿಲ್ಲವೇ

ಆರಾಧಿಸಿ ಅಷ್ಟ ಶಕ್ತಿಯಾ
ಹೊಡೆದೋಡಿಸೀ ದುಷ್ಟ ಶಕ್ತಿಯಾ
ನಮ್ಮ ಮನೆ ನಮ್ಮ ನಾಡು,
ನಮ್ಮ ದೇಶ ನಮ್ಮ ಕುಲ
ಬಯಸುತಿದೆ ಶಕ್ತಿ ರೂಪ
ಸಾಕು ಇನ್ನು ಸೀತೆ ನಮನ,
ವನಿತೆ ತೋರು ನಿನ್ನ ಕೋಪ
ಅಗ್ನಿಕನ್ಯೆಯಾಗು ಬಾ ವೀರರಮಣಿಯೇ
ಬನ್ನಿರೀ ಮಹಿಳೆಯರೇ,ಬನ್ನಿರೀ ಮಹಿಳೆಯರೇ
ಆರಾಧಿಸಿ ಅಷ್ಟ ಶಕ್ತಿಯಾ
ಹೊಡೆದೋಡಿಸೀ ದುಷ್ಟ ಶಕ್ತಿಯಾ