Wednesday, June 27, 2007

ಅನಂತಾಂಜಲಿ

ಅನಂತಾಂಜಲಿ

ಹಾರಿ ಹೋಯಿತೆ ಹಕ್ಕಿ ದೂರ ಗಗನಕೆ ಚಿಮ್ಮಿ
ಮಿನುಗುವ ಆ ಚುಕ್ಕಿ,ಯಾವ ತಾರೆಗೆ ಕಮ್ಮಿ

ದನಿಯು ಇಂಗಿದ ಮೇಲೆ ದೇಹದ ಹಂಗೇಕೆ
ತಂತಿ ಹರಿದ ಮೇಲೆ ವೀಣೆಯ ಹೊಣೆಯೇಕೆ
ಶಾರೀರವಿಲ್ಲದ ಶರೀರ ತಾನೇಕೆ
ಸ್ವರವು ನಿಂತಾ ಮೇಲೆ ಬದುಕುವುದಿನ್ನೇಕೆ

ಹಾರಿ ಹೋಯಿತೆ ಹಕ್ಕಿ ದೂರ ಗಗನಕೆ ಚಿಮ್ಮಿ
ಮಿನುಗುವ ಆ ಚುಕ್ಕಿ,ಯಾವ ತಾರೆಗೆ ಕಮ್ಮಿ



ತುಂಬು ನಾದದ ಗಾನ ಅನಂತದಲಿ ಲೀನ
ತುಂಬುರು ನಾರದರ ಜೊತೆಯಲಿ ಆಸೀನ
ಗಂಧರ್ವಲೋಕದಲಿ ಸುಮಧುರ ಗಾನ
ಗಂಧದ ನಾಡಿನಲಿ ನೋವಿನ ಆ ಮೌನ

ಹಾರಿ ಹೋಯಿತೆ ಹಕ್ಕಿ ದೂರ ಗಗನಕೆ ಚಿಮ್ಮಿ
ಮಿನುಗುವ ಆ ಚುಕ್ಕಿ,ಯಾವ ತಾರೆಗೆ ಕಮ್ಮಿ

ತುತ್ತಿಟ್ಟು ಸಲಹಿದ ಮುತ್ತಿನಂತ ಮೂರು
ಜೊತೆಯಲಿ ಸೇರಿ ಹಕ್ಕಿಗಳು ನೂರು
ಸರಿಗಮ ಗಾನದಿ ಕಂಬನಿ ಕಲರವ
ಹರಿಸಲು ಬೇಕೇನು ಮಿಗಿಲಾದ ಗೌರವ

ಹಾರಿ ಹೋಯಿತೆ ಹಕ್ಕಿ ದೂರ ಗಗನಕೆ ಚಿಮ್ಮಿ
ಮಿನುಗುವ ಆ ಚುಕ್ಕಿ,ಯಾವ ತಾರೆಗೆ ಕಮ್ಮಿ


ಎಚ್.ಕೆ.ಸೂರ್ಯಪ್ರಕಾಶ್
ದಿನಾಂಕ:: 07.03.1995