Tuesday, July 01, 2008

ಸರಿಯೇನೋ ಹರಿ

ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಈ ಪರಿ ತುಂಟತನ
ಸರಿಯೇನೋ ಹರಿ ಸರಿಯೇನೋ
ನೆರೆ ಮನೆಗಳಿಗೋಗಿ ಬೆಣ್ಣೆ ಕದಿವೆಯಂತೆ
ಹರೆಯದ ಬಾಲೆಯರ ಜಡೆ ಎಳೆಯುವೆಯಂತೆ
ದೂರುಗಳನೆಷ್ಟೆಂದು ನಾ ಕೇಳಿಕೊಳ್ಳಲಿ
ಊರವರ ಮಾತುಗಳ ಹ್ಯಾಗೆ ತಾನೆ ಸೈರಿಸಲಿ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಕೆರೆಯೊಳಗೋಗಿ ನೀನು ಬಾಲ ಹಿಡಿಯುವೆಯಂತೆ
ಹಾವ ಹೆಡೆಯ ಮೇಲೆ ಕುಣಿಕುಣಿಯುವೆಯಂತೆ
ಏನಾದರಾದರೆ ನಾನೇನು ಮಾಡಲಿ
ನಿನ್ನಪ್ಪ ಕೇಳಿದರೆ ನಾನೇನ ಹೇಳಲಿ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಚಿಕ್ಕ ಹುಡುಗನು ನೀನು ದೇವರಂತಿರಬೇಕು
ಸಿಕ್ಕಸಿಕ್ಕವರ ಜೊತೆ ಜಗಳ ಏತಕೆ ಬೇಕು
ಅಕ್ಕಪಕ್ಕದವರೆಲ್ಲ ಹೊಗಳುವಂತಿರಬೇಕು
ಚೊಕ್ಕ ಬಂಗಾರ ನೀನು ನನಗಿನ್ನೇನು ಬೇಕು
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ದಿನಾಂಕ::

ಚೆಲುವಿನಾ ಗುಡಿ

ಎಂಥ ಚೆಲುವಿನಾ ಗುಡಿ ಬಸವನಾಗುಡಿ
ಧರ್ಮದಾ ನೆಲವೀಡು ದೇವರಾ ಬೀಡು

ಹರಸುತ್ತ ಎಲ್ಲರನು ನೆಲೆಸಿಹನು ಮಹಕಾಯ
ಗುಡ್ಡದಾ ಮೇಲಿಹನು ಕಾರ್ತಿಕೇಯಾ
ನಂದಿಯಾ ಜೊತೆಯಲ್ಲಿ ಶಿವನಿಲ್ಲಿ ವಾಸ
ನಂಬಿದಾ ಭಕ್ತರಿಗೆ ಇದುವ್ ಕೈಲಾಸ

ಎಂಥ ಚೆಲುವಿನಾ ಗುಡಿ ಬಸವನಾಗುಡಿ
ಧರ್ಮದಾ ನೆಲವೀಡು ದೇವರಾ ಬೀಡು

ಶಂಕರಾಮಠದಲ್ಲಿ ಶಾರದೆಯ ವೇಣಾಗಾನ
ರಾಮಕೃಷ್ಣಾಶ್ರಮದ ದಿವ್ಯಮೌನ
ರಾಮಾಂಜನೇಯರಾ ಪ್ರೆಮದಾಲಿಂಗನ
ಗುರು ರಾಘವೇಂದ್ರರ ಬೃಂದಾವನ
ಎಂಥ ಚೆಲುವಿನಾ ಗುಡಿ ಬಸವನಾಗುಡಿ
ಧರ್ಮದಾ ನೆಲವೀಡು ದೇವರಾ ಬೀಡು

ಲಕ್ಶ್ಮಿಯಾ ಜೊತೆಯಲ್ಲಿ ಕೋಟೆ ವೆಂಕಟರಮಣ
ಸಜ್ಜನರ ನಡುವುನಲಿ ಸತ್ಯನಾರಾಯಣ
ದಿನ ದಿನವು ನಡೆದಿಹುದು ಧರ್ಮ ಪಾರಾಯಣ
ಆಸ್ತಿಕ ಜನಗಳ ಜೀವನ ಪಾವನ
ಎಂಥ ಚೆಲುವಿನಾ ಗುಡಿ ಬಸವನಾಗುಡಿ
ಧರ್ಮದಾ ನೆಲವೀಡು ದೇವರಾ ಬೀಡು
ದಿನಾಂಕ::