Sunday, September 24, 2006

ಹನಿಜೇನು

1)ಮರಗಿಡಗಳನ್ನು ಪ್ರೀತಿಸದವನು
ಮನುಷ್ಯರನ್ನು ಪ್ರೀತಿಸಲಾರ
2)ಜೀವಕೊಟ್ಟ ತಾಯಿಗೆ ಕೊಟ್ಟಿದ್ದೇನು ನಾವು
ಹುಟ್ಟುವಾಗ ಬೆಳೆಯುವಾಗ ಹೊಟ್ಟೆತುಂಬ ನೋವು
3)ಚಿಕ್ಕ ವಯಸ್ಸಿನ ತಂಗಿಯ ಗಂಡ
ಸತ್ತ ಸುದ್ದಿ ತಿಳಿದ ಪುರೋಹಿತ
ಪಂಚಾಂಗ ನೋಡಿ ಒಳ್ಳೆ ನಕ್ಷತ್ರದಲ್ಲಿ
ಸತ್ತಿದ್ದಾನೆಂದು ತಿಳಿದು ಸಂತಸಪಟ್ಟ
4)ಎಲ್ಲ ಹೂವಿನಂತಲ್ಲ ನನ್ನ ಶೈಲ
ಅವಳು ಒಂದು ತಾವರೆ
ಎಲ್ಲ ನಕ್ಷತ್ರ್ಗಳಂತಲ್ಲ ನನ್ನ ಲೈಲ
ಅವಳು ಧೃವ ತಾರೆ

1 comment:

bhadra said...

ಶ್ರೀಯುತ ಸೂರ್ಯಪ್ರಕಾಶರಿಗೆ ಹುಟ್ಟಿದ ಹಬ್ಬದ ಶುಭಾಶಯಗಳು.