Wednesday, September 13, 2006

ಒಂದು ಪ್ರಾರ್ಥನೆ(ಕವನ)

1) ಯಾರ ದೂರಲಿ ಯಾರ ಹಳಿಯಲಿ
ನನ್ನ ಈ ಪರಿ ಪಾಡಿಗೆ
ದನಿಯು ಸಹ ಸಿಗದಾಗಿದೆ
ನನ್ನ ನೋವಿನ ಹಾಡಿಗೆ.

2)ಎಷ್ಟು ಕಷ್ಟವ ಕೊಡುವೆ ಪ್ರಭುವೆ
ನನ್ನ ಯಾವ ತಪ್ಪಿಗೆ
ಇಷ್ಟು ನಿಷ್ಟುರ ನೋವುಗಳಿಗೆ
ಇಹುದೆ ನಿನ್ನ ಒಪ್ಪಿಗೆ.

3)ನಡೆಯಲಾಗದ ನಡುವ ಪಡೆದು
ನಡೆಸುತಿಹೆನು ಜೀವನ
ಪಡೆಯಬಾರದ ವಿಧಿಯ ಪಡೆದು
ಉಡುಗಿ ಹೋಗಿದೆ ಚೇತನ.

4)ಊರುಗೋಲಾಗಿಹೆನು ನಾನು
ನನ್ನ ಮಡದಿ ಮಗುವಿಗೆ
ಮುರಿದು ಕೋಲನು ದೊರೆಯೆ ನೀನು
ತಳ್ಳದಿರು ಮುಳ್ಳ ಮಡುವಿಗೆ.

5)ಹಾರೊ ಹಕ್ಕಿಯ ರೆಕ್ಕೆಯನ್ನು
ಕಡಿಯದಿರು ಓ ತಂದೆಯೇ
ಗೂಡು ಸೇರುವ ದಾರಿಯಿನ್ನು
ದೂರವಿರುವುದು ಬಂಧುವೆ.

6)ಗಂಧ ಸೂಸಲು ಪುಷ್ಪ ಅರಳಲು
ಮೊಗ್ಗು ಒಂದು ಕಾದಿದೆ
ಎಳೆಯ ಗಿಡದ ಬೇರುಗಳನು
ಕಳಚದಿರು ಓ ಬಂಧುವೆ.
ಸೂರ್ಯಪ್ರಕಾಶ್ ಹುಳಿಯಾರ್

1 comment:

bhadra said...

ಒಳ್ಳೆಯ ಪ್ರಾರ್ಥನೆ ಸಾರ್. ಮಕ್ಕಳಿಗೆ ಕಲಿಸಿ ಕೊಡಬೇಕಾದ್ದಂಥದ್ದು. ಧನ್ಯವಾದಗಳು.