Thursday, August 24, 2006

ನನ್ನ ಹಾಡು ನನ್ನ ಪಾಡು

ಗಾನ ಪುಷ್ಪ
ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ

ಆಡೊ ಹುಡುಗರು ನಾವು ಹಿರಿತನ ಬೇಕಿಲ್ಲ
ಒಡವೆಗಳಗೊಡವೆ ನಮಗಂತು ಇಲ್ಲ
ಹಾಡುಹೋಗಳ ನಡುವೆ ನಿನ್ನನ್ನು ಪೂಜಿಪೆವು
ಮೋದಕಾ ಪ್ರಿಯ ಸ್ವಾಮಿ ನಮ್ಮನ್ನು ಪೊರೆಯೋ

ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ

ಅರಿವಿನಾ ಹರವಿಲ್ಲ ಬುದ್ಧಿಯಾ ಬಲವಿಲ್ಲ
ಸಿರಿಕಂಠವೇ ನಮ್ಮ ಸಿರಿತನಾವೆಲ್ಲ
ಹರಪುತ್ರನೇ ನಿನ್ನ ಕರಮುಗಿದು ಬೇಡುವೆವು
ವರವಿನಾಯಕ ನಮ್ಮ ಹರಸು ತಂದೇ

ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ

ಇಂಪಾದರೂ ಕಿವಿಗೆ ಕೋಗಿಲೆಗಳಾ ಹಾಡು
ಅರಿವಿಲ್ಲವೇ ನಿನಗೆ ಪರಪುಟ್ಟರಾ ಪಾಡು
ವನಸುಮಗಳು ನಾವು ಮನವಿಟ್ಟು ಹಾಡುವೆವು
ಗಾನಪ್ರಿಯ ಗಣಪತಿಯೆ ಕಾಪಾಡು ದೊರೆಯೇ

ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ

2 comments:

bhadra said...

ವರಸಿದ್ಧಿವಿನಾಯಕನಿಗೆ ತುಂಬಾ ಒಳ್ಳೆಯ ನೈವೇದ್ಯವನ್ನೇ ಅರ್ಪಿಸಿದ್ದೀರಿ ಸಾರ್. ನಿಮ್ಮ ಹಳೆಯ ಕವನಗಳೆಲ್ಲವನ್ನೂ ಇಲ್ಲಿ ಹಾಕಿರಿ.

ತುಂಬಾ ಚೆನ್ನಾಗಿದೆ ಸಾರ್. ಮತ್ತೆ ಮತ್ತೆ ಓದಬೇಕೆನಿಸುತ್ತಿದೆ. ಹಾಡುಗಾರರಿಗೆ ಹಾಡಬೇಕಿನಿಸುತ್ತದೆ.

huliyarprakash said...

ಹೌದು ಸರ್,
ಇದು ಹಾಡಲು ತುಂಬಾ ಚೆನ್ನಾಗಿದೆ.ಈ ಹಾಡನ್ನು ನನ್ನ ಪತ್ನಿ ಸಹ ಗಾಯಕರೊಂದಿಗೆ ಅನೇಕ ವೇದಿಕೆಗಳಲ್ಲಿ ಹಾಡಿದ್ದಾರೆ.ಚಿಕ್ಕ ಹುಡುಗರು ಹಾಡಿದರೆ ತುಂಬಾ ಚೆನ್ನಾಗಿರುತ್ತದೆ ಎಂದು ನನ್ನ ಭಾವನೆ.
ಢನ್ಯವಾದಗಳು ಸರ್,